ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಹಾರರ್ ಹನಿಗತೆಗಳು

ಅವಳು ಅಲೋನ್ ಅಲ್ಲ!

ಅವತ್ತು ಅವಳು ಒಬ್ಬಳೇ ಮನೆಯಲ್ಲಿದ್ದಳು. ತನ್ನಷ್ಟಕ್ಕೇ ತಾನೇ ಅದ್ಯಾವುದೋ ಸಾಂಗು ಗುನುಗುತ್ತಿದ್ದಳು.
ಅವಳ ಬೆನ್ನ ಹಿಂದೆ ಯಾರೋ ವಿಕಾರ, ಕ್ಷೀಣ ಧ್ವನಿಯಲ್ಲಿ ಇವಳೋಟ್ಟಿಗೆ ಹಾಡಿನಲ್ಲಿ ದನಿ ಸೇರಿಸಿದ ಹಾಗನ್ನಿಸಿತವಳಿಗೆ. ಗಾಬರಿಗೊಂಡು ತಿರುಗುವಷ್ಟರಲ್ಲಿ ಕರ್ರಗಿನ ಆಕೃತಿಯೊಂದು ಅವಳ ರೂಮಿನಿಂದ ಸರಿದು ಹೋಗಿದ್ದು ಕಾಣಿಸಿತು. ಆಕೆ ಬೆಚ್ಚಿ 
ಹಾಲ್‌ಗೆ ಬಂದು ನೋಡಿದಳು. ಅಲ್ಯಾರೂ ಕಾಣಿಸಲಿಲ್ಲ. ಮನೆಯ ಡೋರ್ ಒಳಗಿನಿಂದ ಲಾಕ್ ಆಗಿದ್ದ ಸ್ಥಿತಿಯಲ್ಲೇ ಇತ್ತು. ಆಕೆಯ ಮುಖ ಭಯದಿಂದ ಬಿಳುಚಿಕೊಂಡಿತು!


*******

ನಿಂಬೆಹಣ್ಣು, ಬಿದಿರಿನ ಬುಟ್ಟಿ


ಸುಂಡೇಕೆರೆಯಿಂದ ಬೇಲೂರಿಗೆ ಹೋಗುವಾಗ ಸಿಗುವ ಸ್ಮಶಾನ ದಾರಿಯಲ್ಲಿ ಯಾರೂ ಅಡ್ಡಾಡುವುದು ಕಡಿಮೆಯೆ. ಆದರೆ ಅವತ್ತು ಬಸಪ್ಪಣ್ಣ ಯಾರ ಮಾತಿಗೂ ಕೇರ್ ಅನ್ನದೆ ಅದೇ ಮೂರುದಾರಿ ಸೇರುವಲ್ಲಿ ಕತ್ತರಿಸಿ ಕುಂಕುಮ ಹಚ್ಚಿದ್ದ ನಿಂಬೆಹಣ್ಣು, ಹೂವು, ಸಣ್ಣ ಬಿದಿರಿನ ಬುಟ್ಟಿಯನ್ನೆಲ್ಲಾ ದಾಟಿಕೊಂಡೇ ಹೋದ. ಮಾರನೆಯ ದಿನ ಬಸಪ್ಪಣ್ಣ ರಕ್ತ ಕಾರಿಕೊಂಡು ಸತ್ತ ಸುದ್ದಿ ಸಿಕ್ಕಿತು!


-ಸದಾ ಸಕಲೇಶಪುರ 

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು